ಕೋಲಾರ: ಸದಾ ಒಂದಿಲ್ಲೊಂದು ಪ್ರಾಕೃತಿಕ ವಿಕೋಪಗಳಿಂದ (Natural Disasters) ನಷ್ಟ ಎದುರಿಸುವ, ಕೋಲಾರದ ರೈತರಿಗೆ (Kolar Farmers) ಈ ಬಾರಿ, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಪೈಂಗಲ್ ಚಂಡಮಾರುತದ ಎಫೆಕ್ಟ್ ತಟ್ಟಿದೆ, ರಾಗಿ (Ragi Crop) ಬೆಳೆದು ಕೈಗೆ ಬಂದಿರುವ ಬೆಳೆಯನ್ನ ಕಟಾವು ಮಾಡಲಾಗದ ಪರಿಸ್ತಿತಿ ಉಂಟಾಗಿದ್ದು, ಶೀತಗಾಳಿ ಮತ್ತು ತುಂತುರು ಮಳೆಯಿಂದ (Fengal Cyclone) ರಾಗಿ ಮೊಳಕೆ ಬಿಡುವ ಭೀತಿ ಎದುರಾಗಿದೆ.
ಶೀತಗಾಳಿ ಎಫೆಕ್ಟ್!
ನೆರೆಯ ತಮಿಳುನಾಡು ಮತ್ತು ಆಂಧ್ರ ರಾಜ್ಯಗಳ ಗಡಿ ಹಂಚಿಕೊಂಡಿರುವ ಕೋಲಾರ ಜಿಲ್ಲೆಗೆ ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಗಳು, ಇಲ್ಲಿಯೂ ಸಹ ಪ್ರಭಾವ ಬೀರುತ್ತದೆ. ಇದೀಗ ಪೈಂಗಲ್ ಚಂಡಮಾರುತದ ಪರಿಣಾಮವಾಗಿ ತಮಿಳುನಾಡಿನಾದ್ಯಂತ ವಿಪರೀತ ಮಳೆಯಾಗ್ತಿದ್ದು, ಜನಜೀವನ ಸಾಕಷ್ಟು ಅಸ್ತವ್ಯಸ್ತಗೊಂಡಿದೆ. ಅದೇ ರೀತಿ ಕೋಲಾರ ಜಿಲ್ಲೆಯಲ್ಲಿ ಸಹ ಈ ಚಂಡಮಾರುತದ ಪರಿಣಾಮ ಕಳೆದೆರಡು ದಿನದಿಂದ ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಜೊತೆಗೆ ಶೀತಗಾಳಿ ಬೀಸುತ್ತಿರುವ ಪರಿಣಾಮ ಚಳಿಯಿಂದ ಜನರು ತತ್ತರಿಸಿದ್ದು, ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ.
YM Poll
Gift and Voucher for Premium Customers
35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ
ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಫೆಂಗಲ್ ಚಂಡಮಾರುತ ಕೋಲಾರ ಜಿಲ್ಲೆಯ ಬೆಳೆಗಳನ್ನು ಹಾಳು ಮಾಡುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಮಳೆಯಾಗ್ತಿದೆ. ಜೊತೆಗೆ, ಶೀತಗಾಳಿ ಬೀಸುತ್ತಿರುವ ಪರಿಣಾಮ ಚಳಿಯಿಂದ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾಗಿರುವ ರಾಗಿಗೆ ಈ ಶೀತಗಾಳಿ ಮತ್ತು ಮಳೆ ಆತಂಕ ತಂದೊಡ್ಡಿದೆ. 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆದಿದ್ದು ಕಟಾವು ಮಾಡಲು ಸಿದ್ದತೆ ಮಾಡಿಕೊಂಡಿದ್ದರಿಗೆ ಶಾಕ್ ಎದುರಾಗಿದೆ. ಕಟಾವಿಗೆ ಬಂದಿರುವ ರಾಗಿ, ಹೊಲದಲ್ಲೇ ಮೊಳಕೆಯೊಡೆಗುವ ಭೀತಿ ಕಾಡುತ್ತಿದೆ. ತುಂತುರು ಮಳೆ, ಭಾರೀ ಗಾಳಿ ಮತ್ತು ಶೀತದಿಂದಾಗಿ ರಾಗಿ ನೆಲಕಚ್ಚುವ ಆತಂಕ ಎದುರಾಗಿದೆ.
ತರಕಾರಿ ಇಳುವರಿ ಕುಂಠಿತ
ಚಂಡಮಾರುತದ ಎಪೆಕ್ಟ್ ಕೋಲಾರ ಎಪಿಎಂಸಿ ಮಾರುಕಟ್ಟೆಗೂ ತಟ್ಟಿದೆ, ನಿರಂತರ ಮಳೆಯಿಂದಾಗಿ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಾಗಿದೆ. ಕೆಲವು ತರಕಾರಿಗಳ ಆವಕದಲ್ಲಿ ಏರಿಳಿತ ಉಂಟಾಗಿ ಬೆಲೆಯಲ್ಲಿ ಏರಿಳಿತ ಉಂಟಾಗಿದೆ. ಪಕ್ಕದ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ದಳ್ಳಾಳಿಗಳು ತರಕಾರಿಗಳನ್ನು ಕೊಳ್ಳಲು ಆಗಮಿಸಿದ್ದರು. ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಇಳುವರಿ ಬಂದಿಲ್ಲ, ಹಾಗಾಗಿ ಬೆಲೆಯಲ್ಲಿ ಏರಿಳಿತವಾಗಿವೆ. ಇನ್ನು ಮಾರುಕಟ್ಟೆ ಯಲ್ಲಿ ಮಳೆಯಿಂದಾಗಿ ಸಾಕಷ್ಟು ತೊಂದರೆ ಸೃಷ್ಟಿಯಾಗಿದೆ, ರೈತರಿಗೂ ವರ್ತಕರಿಗೂ ಸೇರಿದಂತೆ ಎಲ್ಲರಿಗೂ ಮಳೆಯ ಕಾಟ ಕಾಡುತ್ತಿದೆ.